ತೆರೆದ ಬಾಗಿಲು ನಮ್ಮದು
ತೆರೆದ ಹೃದಯವು ನಮ್ಮದು
ಪ್ರೀತಿಯಿಂದ ಬಾರೋ ಅತಿಥಿ
ನಮ್ಮ ಮನೆಯೇ ನಿಮ್ಮದು .
ಬಿಚ್ಚು ಮನಸು ನಮ್ಮದು
ಚುಚ್ಚು ನುಡಿಯ ನುಡಿಯದು
” ಅತಿಥಿ ದೇವೋ ಭವ ” ಎನ್ನುವ
ಆತಿಥ್ಯ ಮನವು ನಮ್ಮದು .
ಒಂದೇ ಭಾವ ನಮ್ಮದು
ರೈತ ಜೀವ ನಮ್ಮದು
ಮನುಜ ಕುಲಕೆ ಅನ್ನ ಕೊಡುವ
ದುಡಿವ ವರ್ಗ ನಮ್ಮದು
ಈ ಭೂಮಿ ನಮ್ಮ ತಾಯಿಯು
ಬಸವ ನಮ್ಮ ತಂದೆಯು
ದೇಶದ ಹಿತಕೆ ಶ್ರಮಿಸುವಂಥ
ಶ್ರಮಿಕ ವರ್ಗ ನಮ್ಮದು .
ಒಕ್ಕಲು ಕುಲ ನಮ್ಮದು
ಹೊಲವೇ ಹೊನ್ನು ಎಂದಿಗೂ
ಕುಲಕೆ ದ್ರೋಹ ಬಗೆದೊಡೆ
ತೋಳಿಗೆ ತೋಳ್ ಬೆಸೆವೆವು
ರಚನೆ : 🔰 ✒️
ಬಸವರಾಜಪ್ಪ. ಜೆ. ಎನ್. ( jnb )
ಸಾಹಿತಿಗಳು. ಭದ್ರಾವತಿ .
ಮೊ : 8105441418




















