ಇಂದು ದಿನಾಂಕ 18/ 07/ 2026 ರಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದ ಅಡಿಯಲ್ಲಿ ಬೃಹತ್ ಆಯುಷ್ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮದಲ್ಲಿ ಬೆಳಿಗ್ಗೆ ಶಾಲಾ ಮಕ್ಕಳ ಜೊತೆಗೂಡಿ ಜಾಥಾವನ್ನು ಮಾಡಲಾಯಿತು. ನಂತರ ವೇದಿಕೆ ಕಾರ್ಯಕ್ರಮ ಗ್ರಾಮದ ಹಿರಿಯರು ಶಾಲೆಯ ಶಿಕ್ಷಕರು ಹಾಗೂ ಸಾರ್ವಜನಿಕರ ಜೊತೆಗೆ ಆಯುಷ್, ಆರೋಗ್ಯ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ತದ ನಂತರ ಸುಮಾರು 350 ರೋಗಿಗಳ ತಪಾಸಣೆ ಮಾಡಲಾಯಿತು. ಹಾಗೂ 150 ವಿದ್ಯಾರ್ಥಿಗಳ ರಕ್ತ ಪರೀಕ್ಷೆ ಮಾಡಿಸಿ ಅವರಿಗೆ ರಕ್ತದ ಗುಂಪಿನ ಪ್ರಮಾಣ ಪತ್ರವನ್ನು ನೀಡಲಾಯಿತು.
ಇದೇ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು 15 ದಾನೆಗಳಿಂದ.15 ದಾನಿಗಳಿಂದ ರಕ್ತ ದಾನವನ್ನು ಪಡೆದುಕೊಳ್ಳಲಾಯಿತು.
ಈ ಕಾರ್ಯಕ್ರಮವು ಜಿಲ್ಲಾ ಆಯುಷ್ಯ ಅಧಿಕಾರಿಗಳು ಡಾಕ್ಟರ್ ಪರ್ವತ ಗೌಡ ಹಿರೇಗೌಡರ್ ರವರ ಮಾರ್ಗದರ್ಶನದಲ್ಲಿ ನಡೆಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಸ್ವಾಗತವನ್ನು ನಂದಿಹಳ್ಳಿ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಡಾ. ಸುಂಕದ್ ರವರು ನೆರವೇರಿಸಿಕೊಟ್ಟರು. ಪ್ರಸ್ತಾವನೆಯನ್ನು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಡಳಿತ ವೈದಾಧಿಕಾರಿಗಳಾದ ಡಾ. ಗುರುರಾಜ ಉಮಚಗಿ ರವರು ನೆರವೇರಿಸಿದರು.
ತಜ್ಞ ವೈದ್ಯರಾದ ಡಾ. ವೀಣಾ ಬಿಜ್ಜಳ ಹಾಗೂ ಡಾ. ದೀಪ್ತಿ ಕುರುಬರ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿದರು. ನರ್ಸಿಂಗ್ ಅಧಿಕಾರಿಯಾದ ದುರ್ಗಪ್ಪ ಹಾಗೂ ಫಾರ್ಮಸಿ ಅಧಿಕಾರಿಯಾದ ಶ್ರೀಮತಿ ಶೈಲ ರವರು ಔಷಧಿ ವಿತರಣೆ ನೀಡಿದರು. ಯೋಗ ತರಬೇತಿ ರವರಾದ ಬಸವರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು. ಇನ್ನೋರ್ವ ಯೋಗ ತರಬೇತುದಾರರಾದ ಶ್ರೀಮತಿ ಜಯಶರಣಮ್ಮ ಸಾರ್ವಜನಿಕರ ಹೆಸರನ್ನು ನೋಂದಾಯಿಸಿಕೊಂಡರು. ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಡಿ ಗ್ರೂಪ್ ನೌಕರರಾದ ಶರಣಬಸವ, ಹಾಗೂ ಬೆನ್ನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ವರದಿ ಹನುಮೇಶ ಭಾವಿಕಟ್ಟಿ


















