ಬಳ್ಳಾರಿ / ಕಂಪ್ಲಿ: ಜು. 18ರಂದು ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿವತಿಯಿಂದ ಉಚಿತ ಎಲುಬು, ಕೀಲು ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಜಗನ್ನಾಥ ಹಿರೇಮಠ್ ತಿಳಿಸಿದರು.
ಸ್ಥಳೀಯ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯ ಅಕ್ಕಮಹಾದೇವಿ ದೇವಸ್ಥಾನ ಆವರಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿ, ರಾಣೇಬೆನ್ನೂರಿನ ಪ್ರತಿಷ್ಠಿತ ಆಸ್ಪತ್ರೆಯ ಎಂಬಿಬಿಎಸ್ ಡಾ.ಸಂಜೀವ್ ಎಂ.ಮುದ್ರಿ ಇವರ ನೇತೃತ್ವದಲ್ಲಿ ಉಚಿತವಾಗಿ ಎಲುಬು, ಕೀಲು ಸಂಬಂಧಿಸಿದ ಕಾಯಿಲೆ ಮತ್ತು ಮೂಳೆ ಮುರಿತಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ಕಂಪ್ಲಿ ಸೇರಿದಂತೆ ತಾಲೂಕಿನ ಜನರು ಈ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ, ಈ ಉಚಿತ ತಪಾಸಣೆಯ ಸದುಪಯೋಗ ಪಡೆದುಕೊಳ್ಳಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮಹಿಳಾ ಸಂಘದ ಅಧ್ಯಕ್ಷೆ ಡಾ.ಶಾರದಾ ಹಿರೇಮಠ್ ಮೊ.ನಂ-9986789272, ಕಾರ್ಯದರ್ಶಿ ಟಿ.ಸುಮಂಗಲಾ ಮೊ.ನಂ-8971825142, ಪುಷ್ಪಾ ಮೊ.ನಂ-8310990272ಗೆ ಸಂಪರ್ಕಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ.ಸುಮಂಗಳಾ, ಉಪ ಕಾರ್ಯದರ್ಶಿ ಬಿ.ಎಂ.ಪುಷ್ಪಾ, ಸದಸ್ಯೆಯರಾದ ವಾಲಿ ಶಕುಂತಲಾ, ನಿರ್ದೇಶಕಿಯರಾದ ಉಮಾ ಕೋಟೆ, ಅರವಿ ಅನುಪಮಾ, ಟಿ.ಸುಜಾತ, ಪಾಠಶಾಲೆ ಪ್ರಾಚಾರ್ಯ ಘನಮಠಶಾಸ್ತಿ ಮುಖಂಡರಾದ ಎಸ್.ಟಿ.ಬಸವರಾಜ, ವೆಂಕಟೇಶರೆಡ್ಡಿ, ಡಾ.ಜಗನ್ನಾಥ ಹಿರೇಮಠ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















