
ತುಮಕೂರು : ಶ್ರೀ ವಿನೋಬಾ ಭಾವೆಯವರು ಭಾರತ ದೇಶದಾದ್ಯಂತ ಬರಿಗಾಲಿನಲ್ಲಿ 70,000 ಕಿ. ಮೀ. ಸಂಚರಿಸಿ 42 ಲಕ್ಷ ಎಕರೆ ಭೂಮಿಯನ್ನು ದಾನವಾಗಿ ಪಡೆದು ಭೂರಹಿತರಿಗೆ ಮತ್ತು ಬಡವರಿಗೆ ಹಂಚಿದರು.
ತೆಲಂಗಾಣ ಪ್ರದೇಶದಲ್ಲಿ ರಾಮರೆಡ್ಡಿ ಎಂಬುವ ಜಮೀನ್ದಾರರು 100 ಎಕರೆ ಭೂಮಿಯನ್ನು ದಾನವಾಗಿ ಭಾವೆ ಯವರಿಗೆ ನೀಡಿದರು. ಶ್ರೀಯುತರು ಅವಿಭಾಜಿತ ಭಾರತದಾದ್ಯಂತ ಸಂಚರಿಸಿ ಅಲ್ಲಿಯ ಬಡವರಿಗೂ ಸಹ ಭೂ ಧಾನ ಪಡೆದು ಬಡವರಿಗೆ ಹಂಚಿದರು.
ಶ್ರೀಯುತರು ಕೇರಳ ರಾಜ್ಯದ ವೈಕಂ ದೇವಸ್ಥಾನದ ರಸ್ತೆಯಲ್ಲಿ ದಲಿತರಿಗೆ ಪ್ರವೇಶ ನಿರ್ಬಂಧಿಸಿದ್ದನ್ನು ಬಗೆಹರಿಸಿ ಅಲ್ಲಿ ದಲಿತರಿಗೆ ಮುಕ್ತ ಪ್ರವೇಶವನ್ನು ಅವಕಾಶ ಮಾಡಿಕೊಟ್ಟರು. ಕೇರಳ ಮತ್ತು ತಮಿಳುನಾಡು ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ದಲಿತರಿಗೆ ಮತ್ತು ಇತರರಿಗೆ ಮುಕ್ತ ಪ್ರವೇಶವನ್ನು ಮಾಡಿಕೊಟ್ಟರು.
ಶ್ರೀಯುತರು ಅನೇಕ ಸಾಮಾಜಿಕ ಹೋರಾಟವನ್ನು ಮಾಡಿ ಜೈಲು ಶಿಕ್ಷೆಯನ್ನು ಅನುಭವಿಸಿದರು.
ಈ ಮಹಾನ್ ಮಾನವತವಾದಿಯ ಜನ್ಮದಿನದ ಶುಭ ಕೊರೋಣ ಎಂದು ಶ್ರೀ ಸಿ. ಡಿ. ಚಂದ್ರಶೇಖರ್,
ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ಸರ್ವೋದಯ ಮಂಡಲ. ತುಮಕೂರು ಜಿಲ್ಲೆ ಇವರು ಮನವಿ ಮಾಡಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು




















