ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೃತಪಟ್ಟ 9 ಜನ ರೈತ ಕುಟುಂಬಗಳಿಗೆ ಕ್ಷೇಮಾಭಿವೃದ್ಧಿ ನಿಧಿಯಿಂದ ತಲಾ 50 ಸಾವಿರ ರೂ.ಗಳ ಆರ್ಥಿಕ ಸಹಾಯದ ಚೆಕ್ ವಿತರಣೆ

ಬಳ್ಳಾರಿ / ಕಂಪ್ಲಿ : ರೈತರ ಹಿತದೃಷ್ಟಿಯಿಂದ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿದ್ದು, ಪ್ರಸಕ್ತ ವರ್ಷದಲ್ಲಿ ಮೃತಪಟ್ಟ 9 ಜನ ರೈತ ಕುಟುಂಬಗಳಿಗೆ ತಲಾ 50 ಸಾವಿರ ಆರ್ಥಿಕ ಪರಿಹಾರವನ್ನು ಕ್ಷೇಮಾಭಿವೃದ್ಧಿ ನಿಧಿಯಿಂದ ವಿತರಿಸಿದ್ದು, ಈ ಆರ್ಥಿಹ ಸಹಾಯವು ಕುಟುಂಬದ ನಿರ್ವಹಣೆಗೆ ಬಳಕೆಯಾಗುವ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಗುಂಡಾಲ ಯರ‍್ರಿಸ್ವಾಮಿ ಹೇಳಿದರು.
ಸಮೀಪದ ಕುಡತಿನಿ ಪಟ್ಟಣದಲ್ಲಿರುವ ವಿವಿದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮದೊಂದಿಗೆ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು 8210 ಜನ ಸದಸ್ಯರನ್ನು ಹೊಂದಿದ್ದು, ಸುಮಾರು 2 ಕೋಟಿ 8 ಲಕ್ಷ ಷೇರು ಬಂಡವಾಳವಿದೆ. 1003 ಜನರಿಗೆ ಸುಮಾರು 11 ಕೋಟಿ 28 ಲಕ್ಷ ಕೆಪಿಸಿಸಿ ಸಾಲ, 30 ಜನಕ್ಕೆ 1 ಕೋಟಿ 60 ಲಕ್ಷ ಮಧ್ಯಮಾವಧಿ ಸಾಲ, 14 ಜನರಿಗೆ ಸುಮಾರು 15 ಲಕ್ಷ ಕೃಷಿಯೇತರ ಸಾಲ ವಿತರಿಸಿದೆ. ಸುಮಾರು 1 ಕೋಟಿ 62 ಲಕ್ಷ ರಸಗೊಬ್ಬರ ವ್ಯಾಪಾರ ವಹಿವಾಟು ನಡೆಸಿ, ಸುಮಾರು 6 ಲಕ್ಷ 31 ಸಾವಿರ ವ್ಯಾಪಾರ ಲಾಭವಗಳಿಸಿದೆ. ಸುಮಾರು 5 ಲಕ್ಷ 26 ಲಕ್ಷ ಎರಡು ಮಹಿಳಾ ಗುಂಪುಗಳಿಗೆ ವಿತರಿಸಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು. 480 ಕುಟುಂಗಳಿಗೆ ಯಶಸ್ವಿನಿ ಯೋಜನೆ ಅಳವಡಿಸಲಾಗಿದೆ. 20 ಜನರು ಯಶಸ್ವಿನಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಸಂಘವು ಸುಮಾರು 8 ಲಕ್ಷ 2 ಸಾವಿರ ನಿವ್ವಳ ಲಾಭಗಳಿಸಿದೆ ಎಂದರು.
ನಂತರ ಮುಖ್ಯಕಾರ್ಯನಿರ್ವಾಹಕ ಆಂಜನೇಯ ಪದ್ಮಶಾಲಿ ಇವರು ಮಹಾಜನ ಸಭೆಯ ವಾರ್ಷಿಕ ವರದಿ ಮಂಡಿಸಿದರು. ತದ ನಂತರ ಸಂಘದ ಅಭಿವೃದ್ಧಿಗೆ ಸಂಬಂಧಿಸಿಡಂತೆ ರೈತರೊಂದಿಗೆ ಕೆಲವೊಂದು ವಿಷಯಗಳನ್ನು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಡಿಆರ್ ವೀರಭದ್ರಯ್ಯ, ಎರ‍್ರಿಸ್ವಾಮಿ, ಡಿಜಿಎಂ ಮರಿಸ್ವಾಮಿ, ಉಪಾಧ್ಯಕ್ಷ ವೈ.ಷಣ್ಮುಖ, ನಿರ್ದೇಶಕರಾದ ಪಿ.ಅನಿಲ, ಟಿ.ಬಸವರಾಜ, ಪರಶುರಾಮ ಚೌಡ್ಕಿ, ಬಿ.ನಾಗಲಿಂಗಪ್ಪ ಆಚಾರಿ, ಹೆಚ್.ಚಂದ್ರಹಾಸ, ಎಸ್.ನಾಗಮ್ಮ, ಮುಲ್ಲಂಗಿ ಛಾಯಾದೇವಿ, ಕೋರಿ ಮರಿಸ್ವಾಮಿ, ಎಸ್.ನೆಟಗಂಟೆಪ್ಪ, ಟಿ.ಬಿ.ಶಶಿಕಲಾ ಹಾಗೂ ರೈತರು ಹಾಗೂ ಸಿಬ್ಬಂದಿ ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!