
ಕೋಲಾರ/ ಮಾಲೂರು: ನಗರದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಜೆಡಿಎಸ್ ಪಕ್ಷದಿಂದ ಉಚಿತ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ, ಸಮಾಜ ಸೇವಕ ಹೂಡಿ ವಿಜಯ್ ಕುಮಾರ್ ರವರು ಮಾತನಾಡುತ್ತಾ “ತಾಲೂಕಿನ ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಬಡ ಮಕ್ಕಳೇ ಅತಿ ಹೆಚ್ಚು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಉತ್ತಮವಾದ ಪರಿಸರ ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡಬೇಕಾಗಿದೆ. ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ದಾನಿಗಳು ಹಾಗೂ ಸಿಎಸ್ಆರ್ ಅನುದಾನವನ್ನು ಇಲಾಖೆಯು ಬಳಸಿಕೊಳ್ಳುವಂತೆ ಸಲಹೆಯನ್ನು” ನೀಡಿದರು.
ಜೆಡಿಎಸ್ ಮುಖಂಡ ಆರ್.ಪ್ರಭಾಕರ್ ಮಾತನಾಡುತ್ತಾ “ದೇಶದಲ್ಲಿ ಉನ್ನತ ಹುದ್ದೆಯಲ್ಲಿರುವವರೆಲ್ಲ ಸರಕಾರಿ ಶಾಲೆಯಲ್ಲಿ ಓದಿದವರೇ ಆಗಿದ್ದಾರೆ. ಸರಕಾರಿ ಶಾಲೆಯಲ್ಲಿ ಕಲಿಕೆಗೆ ಒಳ್ಳೆ ವಾತಾವರಣ, ಜತೆಗೆ ಗುಣಾತ್ಮಕ ಶಿಕ್ಷಣ ಸಿಗುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣವನ್ನು ಭವಿಷ್ಯದಲ್ಲಿ ಒಳ್ಳೆ ಆಸ್ತಿಯಾಗಿಸಿಕೊಂಡು ದಾನಿಗಳು ನೀಡುವ ಸೌಲಭ್ಯಗಳನ್ನು ಪಡೆದುಕೊಂಡು ಮುಂದಿನ ಭವಿಷ್ಯದ ಉತ್ತಮ ಪ್ರಜೆಗಳಾಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೂನಿಯರ್ ಕಾಲೇಜು ಪ್ರಾಂಶುಪಾಲರಾದ ಎ.ಬಿ ರಾಮಕೃಷ್ಣಪ್ಪ, ಶಿಕ್ಷಕರಾದ ನಂಜುಂಡೇಗೌಡ, ಆಂಜನಪ್ಪ, ಜೆಡಿಎಸ್ ಪಕ್ಷದ ಮುಖಂಡರಾದ ಬಲ್ಲಹಳ್ಳಿ ನಾರಾಯಣಸ್ವಾಮಿ, ಬಿ.ಆರ್. ವೆಂಕಟೇಶ್, ಶ್ರೀನಾಥ್, ಮೈಲಂಡಹಳ್ಳಿ ನಾರಾಯಣಸ್ವಾಮಿ, ದೊಡ್ಡಶಿವಾರ ಶ್ರೀನಾಥ್, ದೊಡ್ಡಶಿವಾರ ಕರವೇ ನಾಣಿ, ಅಮರೀಶ್ ರೆಡ್ಡಿ, ದಿಬ್ಬಯ್ಯ, ವೆಂಕಟೇಶ್ ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















