ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿವಮೊಗ್ಗ/ಭದ್ರಾವತಿ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ!ಫೇಕ್​ ಜಾಹಿರಾತು ನಂಬದಿರಿ! ಶಿವಮೊಗ್ಗ ಎಸ್​ಪಿ ಹೇಳಿದ್ದೇನು!?

ಶಿವಮೊಗ್ಗ ನಗರದ ಸೋಗಾನೆ ವಿಮಾನ ನಿಲ್ದಾಣದಲ್ಲಿ ಕೆಲಸ ಏನಾದರೂ ಸಿಗಬಹುದೇ ಎಂದು ಯವ ಸಮೂಹ ತನ್ನದೇ ದಾರಿಯಲ್ಲಿ ಹುಡುಕಾಡುತ್ತಿದೆ. ಅಲ್ಲದೆ ಸ್ಥಳೀಯವಾಗಿ​ಯೇ ಕೆಲಸ ನೀಡಬೇಕು ಎಂಬ ಅಭಿಯಾನವೂ ಈ ಸಂಬಂಧ ಜೋರಾಗಿ ನಡೆಯುತ್ತಿದೆ ಇದರ ಬೆನ್ನಲ್ಲೆ ಉದ್ಯೋಗ ಕೊಡಿಸುತ್ತೇವೆ ಎಂಬ ಜಾಹಿರಾತುಗಳು ಸಹ ಅಬ್ಬರಿಸುತ್ತಿವೆ ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ಉದ್ಯೋಗಾವಕಾಶದ ಬಗ್ಗೆ ಈ ಮಾಹಿತಿ ನಿಮಗೆ ಗೊತ್ತಿರಲಿ.
ಇದೀಗ ಇಂತಹ ಫೇಕ್​ ಜಾಹಿರಾತುಗಳನ್ನು ನಂಬದಂತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್​ ಕುಮಾರ್​ ರವರು ಸಂದೇಶ ರವಾನಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸ್ತೇವೆ ಎಂಬಂತಹ ಫೇಕ್​ ಜಾಹಿರಾತುಗಳು ಹರಿದಾಡುತ್ತಿದೆ ಎಂದು ನಕಲಿ ಜಾಹಿರಾತಿನ ಫೋಟೋವೊಂದನ್ನು ಷೇರ್ ಮಾಡಿದ್ದಾರೆ ಈ ಜಾಹಿರಾತು ಹಾಗೂ ಇದರಲ್ಲಿರುವ ಮಾಹಿತಿ ಸತ್ಯವಾದುದಲ್ಲ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಫೇಕ್​ ಜಾಹಿರಾತಿನ ಮೂಲ ಪತ್ತೆ ಹಚ್ಚಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸಂದೇಶ ರವಾನಿಸಿದ್ದಾರೆ.

ಇನ್ನು ಜಾಹಿರಾತಿನಲ್ಲಿ ಶಿವಮೊಗ್ಗ ಏರ್​ಪೋರ್ಟ್​ನ ಫೋಟೋ ಬಳಸಿ ವಿವಿಧ ವಿಭಾಗಗಳಲ್ಲಿ ಹುದ್ದೆ ಕೊಡಿಸುವುದಾಗಿ ಪ್ರಕಟಿಸಲಾಗಿತ್ತು ಸದ್ಯ ಇದು ನಕಲಿ(FAKE )ಎಂಬುದು ಗೊತ್ತಾಗಿದ್ದು ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!